S1 EP 104 ದಿಕ್ಕುಗಳು | Direction

ಹಿಂದೆ ಕಣ್ಣಿಗೆ ಕಾಣುವ ಸೂರ್ಯನ ಚಲನೆಯ ಆಧಾರದ ಮೇಲೆ ದಿಕ್ಕುಗಳನ್ನು ಮನುಷ್ಯ ಗುರುತಿಸುತ್ತಿದ್ದ. ಪ್ರತಿದಿನ ಬೆಳಿಗ್ಗೆ ಸೂರ್ಯ ಮೂಡುವ ದಿಕ್ಕಿಗೆ ಒಂದು ಹೆಸರಿಟ್ಟ, ಮುಳುಗುವ ದಿಕ್ಕಿಗೆ ಇನ್ನೊಂದು ಹೀಗೆ ದಿಕ್ಕುಗಳನ್ನು ಹೆಸರಿಸುತ್ತಾ ಬಂದ ಮನುಷ್ಯನು ದಿಕ್ಕುಗಳನ್ನು ಗುರುತಿಸಿದ್ದಾನೆ, ಇದೇ ದಿಕ್ಕುಗಳ ಬಗ್ಗೆ ನಾವು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಸಂಖ್ಯೆಗಳಿಗೂ ನಮ್ಮ ಜೀವನಶೈಲಿಗೂ ಇರುವ ಅವಿನಾಭಾವ ಸಂಬಂಧಗಳನ್ನು ಅವಲೋಕಿಸುತ್ತಾ ಸಾಗೋಣ. ಒಂದೋ ನವರಾತ್ರಿಯ ಮಾತಾದರೆ, ದಶಕಂಠನೂ ನಮ್ಮ ಸಂಸ್ಕೃತಿಯ ಭಾಗವೇ. ಚತುರ್ಭುಜದ ಮಹತ್ವವನ್ನೂ ಕೇಳಿದವರೇ, ನಾವು ಸಪ್ತಸಾಗರವನ್ನೂ ನೋಡಿದವರೇ. ಇವುಗಳಲ್ಲಿ ಕೆಲವೊಂದು, ತಿಳಿದ, ತಿಳಿಯದ ಸಂಖ್ಯೆಗಳ ಜೊತೆಗೆ ಅವಿನಾಭಾವ ಸಂಬಂಧ ಇರುವ ಭಾರತೀಯ ಪರಂಪರೆಯನ್ನುಅವಲೋಕಿಸೋಣ. ಇಂದಿನ ಸಂಚಿಕೆ ಶುರು ಮಾಡೋಣ. ಅನಾದಿ ಕಾಲದಿಂದಲೂ ಮನುಷ್ಯನ ತಿರುಗಾಟ, ಸಂಸ್ಕೃತಿ ಹಾಗೂ ಭಕ್ತಿಯ ನಂಬಿಕೆಗಳಿಗೆ ದಿಕ್ಕುಗಳು ಅವಿಭಾಜ್ಯ ಅಂಗವಾಗಿವೆ ಅನ್ನೋದನ್ನ ನಾವು ನಂಬಿಕೊಂಡು ಬಂದಿದ್ದೇವೆ. ಅಲ್ಲದೇ ಅದು ನಿಜವೂ ಕೂಡ. ನಾವು ಬದುಕ್ತಾ ಇರೋ ಯುಗದಲ್ಲಿ ಇತ್ತೀಚೆಗೆ ನಾವು ರಾಕೆಟ್, ಉಪಗ್ರಹ ಎಲ್ಲ ಬಳಸಿ ಉತ್ತರ ದಿಕ್ಕಿಗೆ ಭೂಮಿಯ ಉತ್ತರ ಧ್ರುವ, ದಕ್ಷಿಣ ದಿಕ್ಕಿಗೆ ದಕ್ಷಿಣ ಧ್ರುವ ಎಂಬುದನೆಲ್ಲಾ ತಿಳಿದಿದ್ದೇವೆ. ಅದಕ್ಕೂ ಮುಂಚೆ ಇದರ ಬಗ್ಗೆ ಮನುಷ್ಯನಿಗೆ ಅಷ್ಟೊಂದು ಜ್ಞಾನ ಇರಲಿಲ್ಲ. ಭೂಮಿಯ ಮೇಲಿಂದ ಕಣ್ಣಿಗೆ ಕಾಣುತ್ತಿದ್ದುದು ಸೂರ್ಯ, ಚಂದ್ರ, ನಕ್ಷತ್ರಗಳು ಮಾತ್ರ. ಕೆಲವರು ಭೂಮಿ ಚಪ್ಪಟೆ ಇದೆಯೆಂದು ಅದರ ತೀರಾ ಅಂಚಿನ ಹೊರಗೆ ಹೋದರೆ ಅಂತರಿಕ್ಷಕ್ಕೆ ಎಂದು ಬಿದ್ದು ಹೋಗುತ್ತೇವೆ ಅಂತೆಲ್ಲಾ ನಂಬಿದ್ದರು. ಹಿಂದೆ ಕಣ್ಣಿಗೆ ಕಾಣುವ ಸೂರ್ಯನ ಚಲನೆಯ ಆಧಾರದ ಮೇಲೆ ದಿಕ್ಕುಗಳನ್ನು ಮನುಷ್ಯ ಗುರುತಿಸುತ್ತಿದ್ದ. ಪ್ರತಿದಿನ ಬೆಳಿಗ್ಗೆ ಸೂರ್ಯ ಮೂಡುವ ದಿಕ್ಕಿಗೆ ಒಂದು ಹೆಸರಿಟ್ಟ, ಮುಳುಗುವ ದಿಕ್ಕಿಗೆ ಇನ್ನೊಂದು. ಅವೆರಡರ ನಡುವಿನ ದಿಕ್ಕುಗಳಿಗೆ ಇನ್ನೆರಡು ಹೆಸರನ್ನ ಇಡ್ತಾನೆ. Mostly ಇದೇ ರೀತಿ ಅನ್ಸತ್ತೆ, ಒಂದೊಂದು ದಿಕ್ಕುಗಳಿಗೆ ಒಂದೊಂದು ಹೆಸರು ಬಂದಿರೋದು. ಗುಡ್ಡ ಕಾಡುಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ ಜಾಗದ ಗುರುತು, ಸೂರ್ಯನ ಸ್ಥಾನ ಹೀಗೆ ಬೇರೆ ಬೇರೆ ವಿಚಾರಗಳ ಆಧಾರದ ಮೇಲೆ ಹೋಗುತ್ತಾ ಇದ್ದನೆನೋ. ಹಾಗಾದ್ರೆ ನಾವು ಈಗ ಹೆಸರಿಸೋ ದಿಕ್ಕುಗಳು ಯಾವುದು ಅದರ ಸುತ್ತಲ ವಿಚಾರಗಳನ್ನ ತಿಳಿದುಕೊಳ್ಳೋಣ. ಸೂರ್ಯ ಮೂಡೋ ದಿಕ್ಕು, ಅಂದರೆ ಉದಯ ಆಗುವ ದಿಕ್ಕು ಮೂಡಣ ಅಥವಾ ಮೂಡಲ ಅಂತ ಕರ್ದ ಅರ್ಥಾತ್ ನಾರ್ಮಲ್‌ ಆಗಿ ಚಾಲ್ತಿಯಲ್ಲಿರೋ ಹೆಸರು ಪೂರ್ವ. ಸೂರ್ಯ ಮುಳುಗುವ ದಿಕ್ಕನ್ನು ಪಡುವಣ ಅಥವಾ ಪಡುವಲ ಅಂದ್ರೆ ಪಶ್ಚಿಮ ಅಂತ ಗುರುತಿಸ್ತಾನೆ. ಉಳಿದ ಎರಡು ಲಂಬವಾಗಿರುವ ದಿಕ್ಕುಗಳು ಉತ್ತರ ಅಥವಾ ಬಡಗಣ ಹಾಗೇನೆ ದಕ್ಷಿಣ ತೆಂಕಣ ಅಂತ ಕರೆಯೋದಕ್ಕೆ ಶುರು ಮಾಡ್ತಾನೆ. ಮುಖ್ಯವಾಗಿ ನಾಲ್ಕು ದಿಕ್ಕುಗಳು. ವಾಸ್ತವಿಕವಾಗಿ ದಿಕ್ಕುಗಳನ್ನ ಭೂಮಿ ಹಾಗೂ ಅದರ ಚಲನೆಯ ಆಧಾರದ ಮೇಲೆ ಗುರುತಿಸಲಾಗತ್ತೆ ಅನ್ನೋದನ್ನ ನಾವು ಕೇಳಿದ್ದೇವೆ. ನಾವು ಭೂಮಿಯ ಮೇಲೆ ಎಲ್ಲೇ ನಿಂತರೂ ಉತ್ತರ ದಿಕ್ಕು ಅಂದ್ರೆ ಭೂಮಿಯ ಉತ್ತರ ಧ್ರುವದ ಕಡೆಗೆ ಹಾಗೇ ದಕ್ಷಿಣ ದಿಕ್ಕು ಭೂಮಿಯ ದಕ್ಷಿಣ ಧ್ರುವದ ಕಡೆಗೆ ಅಂತರ್ಥ. ಉತ್ತರ ಹಾಗೂ ದಕ್ಷಿಣ ದಿಕ್ಕು ಭೂಮಿಯ ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವ ವನ್ನು ತೋರಿಸತ್ತೆ. ಭೂಮಿಯು ಪಶ್ಚಿಮದಿಂದ ಪೂರ್ವದ ಕಡೆಗೆ ತಿರುಗತ್ತೆ. ಪೂರ್ವ ಹಾಗು ಪಶ್ಚಿಮವನ್ನು ಗುರುತಿಸುವ ಇನ್ನೊಂದು ಸುಲಭ ವಿಧಾನವೆಂದರೆ ಸೂರ್ಯ ಉದಯಿಸುವ ದಿಕ್ಕು ಪೂರ್ವವಾದರೆ ಸೂರ್ಯ ಮುಳುಗುವ ಅಂದ್ರೆ ಸೂರ್ಯಾಸ್ತ ಆಗೋ ದಿಕ್ಕು ಪಶ್ಚಿಮ ಆಗಿರುತ್ತದೆ. ಈ 4 ದಿಕ್ಕುಗಳ ನಡುವಿನ ದಿಕ್ಕುಗಳನ್ನು ಅಂತರ್ ದಿಕ್ಕುಗಳು ಅಂತ ಕರೆಯಲಾಗತ್ತೆ. ಅದನ್ನ ವಾಯುವ್ಯ, ಈಶಾನ್ಯ, ಆಗ್ನೇಯ ಮತ್ತು ನೈಋತ್ಯ ಅಂತ ಕರಿತಿವಿ. ಹಾಗಾದ್ರೆ ಈ ದಿಕ್ಕುಗಳನ್ನ ನಾವು ಯಾವುದ್ರಲ್ಲಿ ಕಂಡು ಹಿಡಿಬಹುದು, ಅದಕ್ಕೊಂದು ಸಾಧನ ಬೇಕೆ ಬೇಕು ಅದನ್ನ ನಾವು ಕಂಪಾಸ್ ಅಂತ ಹೇಳ್ತೀವಿ. ಭೂಮಿಯು ದೊಡ್ಡ ಒಂದು ಮ್ಯಾಗ್‌ನೆಟ್ ತರಹ ಕೆಲ್ಸ ಮಾಡತ್ತೆ. ಇದನ್ನೇ ಉಪಯೋಗಿಸಿಕೊಂಡು ಕಂಪಾಸ್ ದಿಕ್ಕುಗಳನ್ನು ಸೂಚಿಸುತ್ತದೆ. ಕಂಪಾಸ್ ಸಾಧನ ಕಂಡು ಹಿಡಿಯುವ ಮುಂಚೆ ಸೂರ್ಯನ ಸ್ಥಾನ, ನಕ್ಷತ್ರಗಳು, ಹಕ್ಕಿಗಳ ವಲಸೆಯ ರೀತಿ ಅಥವಾ ಜಾಗದ ಗುರುತು ಬಳಸಿ ಪ್ರವಾಸ ಮಾಡುತ್ತಿದ್ದರು. ಆದರೆ ಮೋಡಗಳು ತುಂಬಾ ಇದ್ದಾಗ ಸೂರ್ಯ, ನಕ್ಷತ್ರ ಕಾಣಿಸದೇ ಭೂಮಿಯ ಮೇಲಿನ ದ್ವೀಪಗಳು ಇತ್ಯಾದಿ ಗುರುತು ಆಧರಿಸಿ ಸಮುದ್ರದ ಪಯಣ ನಡೆಸಬೇಕಾಗಿತ್ತು. ಈ ಕಂಪಾಸ್ ಕಂಡು ಹಿಡಿದಿದ್ದು ೨೦೦೦ ವರ್ಷಗಳ ಹಿಂದೆ ಚೀನಾದಲ್ಲಿ. ಆಗ ಹಾನ್ ವಂಶ ಆಳುತ್ತಿದ್ದ ಕಾಲ. ನೈಸರ್ಗಿಕವಾಗಿ ಚುಂಬಕ ಶಕ್ತಿ ಇರುವ ಸೂಜಿಗಲ್ಲು ಬಳಸಿ ದಿಕ್ಕುಗಳ ಪತ್ತೆ ಮಾಡುತ್ತಿದ್ದರು. ಇದನ್ನು ಮನೆ ಕಟ್ಟುವಾಗ ಇತರ ಉದ್ದೇಶಗಳಿಗೆ ಬಳಸಲಾಗುತ್ತಿತ್ತು. ತಿರುಗಾಟದ ಸಹಾಯಕ್ಕೆ ಬಳಸಲಾರಂಭಿಸಿದ್ದು ೧೧ನೇ ಶತಮಾನದಲ್ಲಿ. ಅಂದಾಜು ೯೫೦ ವರ್ಷಗಳ ಹಿಂದೆ ಸಾಂಗ್ ವಂಶ ಆಳ್ವಿಕೆಯಲ್ಲಿ. ಹಿಂದೂ ಸಂಸ್ಕೃತಿಯ ಪ್ರಕಾರ 10 ದಿಕ್ಕುಗಳು. ಈ ಪ್ರತಿಯೊಂದು ದಿಕ್ಕುಗಳಿಗೂ ಒಬ್ಬ ದಿಕ್ ಪಾಲಕರಿದ್ದಾರೆ. ಉತ್ತರಕ್ಕೆ ಕುಬೇರ, ದಕ್ಷಿಣಕ್ಕೆ ಯಮ, ಪೂರ್ವಕ್ಕೆ ಇಂದ್ರ, ಪಶ್ಚಿಮಕ್ಕೆ ವರುಣ, ಉತ್ತರ ಪೂರ್ವಕ್ಕೆ ಈಶನ, ದಕ್ಷಿಣ-ಪೂರ್ವಕ್ಕೆ ಅಗ್ನಿ, ಉತ್ತರ ಪಶ್ಚಿಮಕ್ಕೆ ವಾಯು, ದಕ್ಷಿಣ-ಪಶ್ಚಿಮಕ್ಕೆ ನಿರ್ರ್ತಿ, ಮೇಲೆ ಬ್ರಹ್ಮ, ಕೆಳಗೆ ಪಾತಾಳ ಲೋಕಕ್ಕೆ ವಿಷ್ಣು. ಅಂತರ್ ದಿಕ್ಕುಗಳ ಹೆಸರು ಆಯಾ ದಿಕ್ಪಾಲಕರ ಹೆಸರಿನಿಂದ ಕರೆಯಲಾಗತ್ತೆ. ಸಾಮಾನ್ಯವಾಗಿ ಮನೆ ಕಟ್ಟುವಾಗ, ಪೂಜೆ ಸಲ್ಲಿಸುವುದಕ್ಕೆ ಹೀಗೆ ಹಲವು ಕಡೆ ದಿಕ್ಕುಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡ್ಕೊಂಡಿವೆ. ಇನ್ನು ಅಚ್ಚ ಕನ್ನಡದಲ್ಲೂ ಕೂಡಾ ದಿಕ್ಕುಗಳಿಗೆ ಪದಗಳಿವೆ ಆದ್ರೆ ಬಳಕೆಯಾಗ್ತಿರೋದು ಮಾತ್ರ ತುಂಬಾ ಕಮ್ಮಿ. ಗದ್ಯ, ಪದ್ಯ, ಗ್ರಾಂಥಿಕವಾಗಿ ಈ ಪದಗಳು ಬಳಕೆಯಾಗ್ತಿವೆ. ಕನ್ನಡದಲ್ಲಿ ಪಡುವ, ಮೂಡ, ಬಡಗ ಮತ್ತು ತೆಂಕ ಇವು ದಿಕ್ಕು ಸೂಚಕ. ಇವುಗಳಿಗೆ ಅಣ್ ಪ್ರತ್ಯಯವನ್ನು ಸೇರಿಸಿ ಪಡುವಣ, ಮೂಡಣ, ಬಡಗಣ, ತೆಂಕಣ ಅನ್ನೋದು ರೂಢಿ. ಬಡಗು ತೆಂಕು ಅನ್ನೋದನ್ನ ನಾವು ಯಕ್ಷಗಾನದಲ್ಲಿ ಕೇಳಿರ್ತಿವಿ. ನಂಬರ್‌ಗಳನ್ನು ನಂಬೋರು ಹಲವು ಜನ. ಆದರೆ ಅದರ ಹಿಂದಿನ ಕನೆಕ್ಷನ್‌ಗಳನ್ನೂ ಅರಿಯುವ ಪ್ರಯತ್ನ ಇಲ್ಲಿ ಮಾಡ್ತಾ ಇದೀನಿ. ಇಂದಿನ ಸಂಚಿಕೆಯನ್ನ ಮುಗಿಸಿದರೂ ಏಳು ದಿನದ ನಂತರ ಇನ್ನೊಂದು ಸಂಖ್ಯೆಯೊಂದಿಗೆ ಬಂದೆ. ಅಲ್ಲಿಯವರೆಗೆ ಕಾಯ್ತಾ ಇರಿ. ಸಂಚಿಕೆ ಇಷ್ಟವಾದರೆ ನಿಮ್ಮಿಷ್ಟದವರಿಗೂ ಈ ಎಪಿಸೋಡನ್ನು ಶೇರ್‌ ಮಾಡಿ. ಮುಂದಿನ ಸಂಚಿಕೆಯಲ್ಲಿ ಸಿಗ್ತೀನಿ. ಇದು ಭಾರತ ಸಂಖ್ಯಾಲೋಕ ರಿಲ್ಯಾಕ್ಸ್‌ ವಿದ್‌ ಬಡೆಕ್ಕಿಲ ಪ್ರದೀಪ್‌ ಮುಂದುವರಿಯುತ್ತದೆ, ಮುಂದಿನ ಸಂಚಿಕೆಯಲ್ಲಿ…

Further reading

S1 EP 129 ಹಾಯಾಗಿದ್ದರೆ ಗೆಲುವಲ್ಲಿ .. ? | Get out from the Comfort zone

ಒಬ್ಬ ಬಡವನಿದ್ದನಂತೆ. ಅವನು ಪ್ರತಿದಿನ ಅಚಂಚಲ ಭಕ್ತಿಯಿಂದ ದೇವಸ್ಥಾನಕ್ಕೆ ಹೋಗಿ ನಮಸ್ಕರಿಸಿ ಕಾರ್ಯಪ್ರವೃತ್ತನಾಗುತ್ತಿದ್ದ. ಆತನ ಭಕ್ತಿಗೆ ಒಲಿದ ದೇವರು ಪ್ರತ್ಯಕ್ಷನಾಗಿ ನಿನಗೇನು...

S1 EP128 ಆತ್ಮವಿಶ್ವಾಸವೆಂಬ ಮಂತ್ರ | Confidence Mantra

ಗೆಲುವಿನ ಗುಟ್ಟನ್ನು ಬೆನ್ನಟ್ಟುವುದು ಹೇಗೆ ? ಜೀವನದಲ್ಲಿ ಎಲ್ಲ ವಿಧದಲ್ಲೂ ಗೆಲುವಿನ ನಿರೀಕ್ಷೆ ಇಟ್ಟೇ ನಾವು ಮುನ್ನುಗ್ಗುತ್ತಿರುತ್ತೇವೆ ನಿರೀಕ್ಷಿತ ಗೆಲುವನ್ನು ಸಾಧಿಸಲು ಬೇಕಿರುವ...

S1 Ep103 ಗುಣಗಳೆಂದರೆ ಏನು ಮತ್ತು ಅವು ಏಕೆ ಮುಖ್ಯ

ಪುರಾತನವಾದ ಹಿಂದೂ ಧರ್ಮ ತನ್ನನ್ನು ತಾನು ಬದಲಾವಣೆಗಳಿಗೆ ಒಡ್ಡಿಕೊಂಡಿದೆ. ಇಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಪ್ರತೀ ಹಂತದಲ್ಲೂ ಹೇಳಿಕೊಡಲಾಗುತ್ತದೆ. ಅವುಗಳಲ್ಲಿ ಗುಣಗಳೂ...

S1 EP 127 ಇಚ್ಛಾಶಕ್ತಿಯಿಂದ ಗೆಲುವು ನಿಶ್ಚಿತ | Victory is certain with will power

ಇಚ್ಚಾಶಕ್ತಿ ನಮ್ಮ ಸಕ್ಸೆಸ್‌ಗೆ ಕಾರಣವಾಗಬಹುದಾ? ಇಚ್ಛಾಶಕ್ತಿಯಿಂದ ನಾವು ಏನನ್ನ ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ಸಾಕ್ಷಿಯಾಗಿ ಅನೇಕ ಸಾಧಕರಿದ್ದಾರೆ. ಅವರೆಲ್ಲರೂ ನಮಗೆ...

S1 EP 126 ಪ್ರಯತ್ನಿಸಿದವನಿಗೆಂದಿಗೂ ಸೋಲಿಲ್ಲ | Persisting in your efforts eliminates the prospect of failure

ಗೆಲುವಿನ ಶಿಖರವನ್ನೇರಲು ಪ್ರಯತ್ನ ಅನಿವಾರ್ಯವೇ? ಪ್ರಯತ್ನಿಸದೇ ಗೆಲುವು ಅನ್ನೋದು ಸಾಧ್ಯವೇ? ಇಂತಹ ಅನೇಕ ಪ್ರಶ್ನೆಗಳು ನಮ್ಮ ತಲೆಯಲ್ಲಿ ಓಡುತ್ತಲೇ ಇರುತ್ತದೆ. ಈ ಪ್ರಶ್ನೆಗಳಿಗೆ...

S1 EP 125 ಸಕ್ಸೆಸ್‌ಗೆ ಸೂತ್ರಗಳು ಸಾವಿರ. ಸಾವಿರದಲ್ಲಿ ಇನ್ನೊಂದಿಷ್ಟನ್ನ ನಾವು ಈ ಸೀಸನ್‌ನಲ್ಲಿ ಕೇಳೋಣ | success story

Success ಅನ್ನೋದು ಒಬ್ಬೊಬ್ಬರಿಗೆ ಒಂದೊಂದು ರೀತಿ. ನಮ್ಮ ಸಮಾಜದಲ್ಲಿ ಸೋತು ಗೆದ್ದವರು ಒಂದು ಕಡೆಯಾದರೆ, ಗೆದ್ದು ಸೋತವರ ಪಂಗಡ ಇನ್ನೊಂದು ಕಡೆ. ಎರಡು ಪಂಗಡದವರ ಕಥೆಯೂ ನಮಗೆ...